Site icon Rajiv Malhotra – Indic Language Collection

ಹಿಂದೂ ಶುಭ ಸಮಾಚಾರ (Kannada)

ಜಗತ್ತು ಪರಿವರ್ತನೆಯ ಕಾಲದಲ್ಲಿದೆ. ಜಾಗತೀಕರಣ, ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಪ್ರಯಾಣ, ಪರಿಸರ ಸವಾಲುಗಳು, ಧಾರ್ಮಿಕ ಸಂಘರ್ಷ, ಉದಯೋನ್ಮುಖ ಆರ್ಥಿಕತೆಗಳು ಮತ್ತು ಬಹು-ಧ್ರುವೀಯ ಪ್ರಪಂಚ ಇವೆಲ್ಲವೂ ಪುರಾತನ ಮಾನವ ಸಂದಿಗ್ಧತೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಆಲೋಚನೆಯಲ್ಲಿ ಬದಲಾವಣೆಗಳನ್ನು ಹೊಂದಿವೆ.

ಇಂದಿನ ಸವಾಲುಗಳನ್ನು ಪರಿಹರಿಸಲು ನೀಡಲಾಗುವ ಅನೇಕ ಪರಿಹಾರಗಳು ಪುರಾತನ ಚಿಂತನೆ, ಹಳೆಯ ಸಿದ್ಧಾಂತ ಮತ್ತು ಅಸಮರ್ಪಕವೆಂದು ತೋರುತ್ತದೆ. ಈ ಪರಿಹಾರಗಳು ಮತ್ತು ಅವುಗಳನ್ನು ಪ್ರಚಾರ ಮಾಡಲು ರಚಿಸಲಾದ ಸಂಸ್ಥೆಗಳು ಪ್ರಾಥಮಿಕವಾಗಿ ಪಾಶ್ಚಿಮಾತ್ಯರ ದೃಷ್ಟಿಕೋನದಿಂದ ಹುಟ್ಟಿಕೊಂಡಿವೆ, ಹಾಗೆಯೇ ಈ ಚಿಂತನೆ ಸುಮಾರು ಅರ್ಧ ಸಹಸ್ರಮಾನದಿಂದ ವಿಶ್ವ ವ್ಯವಹಾರಗಳಲ್ಲಿ ಪ್ರಬಲವಾಗಿದೆ. ಈ ವಿಶ್ವ ದೃಷ್ಟಿಕೋನವು ಇತಿಹಾಸ, ಪುರಾಣಗಳು, ಬೌದ್ಧಿಕ ಸಂಪ್ರದಾಯಗಳು ಮತ್ತು ಯುರೋಪ್ ಮತ್ತು ಅಮೆರಿಕಕ್ಕೆ ನಿರ್ದಿಷ್ಟವಾದ ಧಾರ್ಮಿಕ ನಂಬಿಕೆಗಳಿಂದ ಆಳವಾಗಿ ರೂಪಿಸಲ್ಪಟ್ಟಿದೆ.

ಲೋಲಕವು ಮತ್ತೊಮ್ಮೆ ಏಷ್ಯಾದತ್ತ ತಿರುಗುತ್ತಿರುವಾಗ ಮತ್ತು ಉದಯೋನ್ಮುಖ ಆರ್ಥಿಕತೆಗಳು ಮತ್ತು ಶಕ್ತಿಗಳು ಅವರ ಸಾಂಸ್ಕೃತಿಕ ಧ್ವನಿಯನ್ನು ಕಲಕುವ ಮತ್ತು ಕಂಡುಕೊಳ್ಳುವಾಗ, ನಮಗೆ ಒಂದು ಸುವರ್ಣ ಅವಕಾಶ ಒದಗಿಸಿದೆ. ನಮ್ಮಲ್ಲಿ ಅನೇಕರು ಪ್ರಪಂಚದ ವೈವಿಧ್ಯಮಯ ಧ್ವನಿಗಳನ್ನು ತಳ್ಳಿಹಾಕಬಹುದು – ವಿಶೇಷವಾಗಿ ಅವರು ದೀರ್ಘಕಾಲದ ನಂಬಿಕೆಗಳಿಗೆ ಸವಾಲು ಹಾಕಿದಾಗ. ಅಥವಾ ನಾವು ಹೊಸ ಮಾದರಿಗಳನ್ನು ಒಪ್ಪಿಕೊಳ್ಳಬಹುದು, ಅವುಗಳು ಪಾಶ್ಚಿಮಾತ್ಯರ ಸವಲತ್ತು ಸ್ಥಾನಕ್ಕೆ ಇರಬಹುದು, ಆದರೆ ಪಾಶ್ಚಾತ್ಯರ ಅನುಕೂಲಕ್ಕಾಗಿ ಮಾತ್ರವಲ್ಲ, ಎಲ್ಲಾ ಮಾನವೀಯತೆಗೂ ಹೊಸದಾಗಿ ಜಗತ್ತನ್ನು ರೂಪಿಸುವ ಭರವಸೆ ನೀಡಬೇಕು.

ನಾವೆಲ್ಲರೂ ಕೇಳಿದ ಹಳೆಯ ಮಾದರಿಗಳಲ್ಲಿ ಒಂದನ್ನು ಕ್ರಿಶ್ಚಿಯನ್ನರು ಬಳಸುವ “ಒಳ್ಳೆಯ ಸುದ್ದಿ” ಎಂಬ ಪದಗುಚ್ಚ. (“ಒಳ್ಳೆಯ ಸುದ್ಧಿ” ಎಂದರೆ ಯೇಸು ಕ್ರಿಸ್ತನ ಜೀವನ ಕಥೆ ಬೈಬಲ್ ಪುಸ್ತಕದಲ್ಲಿ ಬರೆದಂತೆ). ಕೃತರ “ಒಳ್ಳೆಯ ಸುದ್ದಿ” ಏನೆಂದರೆ ಯೇಸು ಕ್ರಿಸ್ತನು ಮಾನವೀಯತೆಯ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಹುಟ್ಟಿದ ಭಗವಂತನ ಒಬ್ಬನೇ ಮಗ. ಹಿಂದೂಗಳು ಇಂತಹ ಪ್ರಾಯಶ್ಚಿತ್ತವನ್ನು ಅನಗತ್ಯವೆಂದು ಭಾವಿಸುತ್ತಾರೆ. ಏಕೆಂದರೆ ಹಿಂದೂಗಳ ನಂಬಿಕೆಯಲಾದಲ್ಲಿ ಮನುಷ್ಯನು ಪಾಪಿಯಲ್ಲ, ದೈವಅಂಶ ಸಂಬೂತನಾಗಿದ್ದಾನೆ, ಮತ್ತು ನಾವು, ಪ್ರತಿಯೊಬ್ಬರೂ, ಯೇಸುವಿನಂತೆಯೇ ಅದೇ ಸಾಮರ್ಥ್ಯವನ್ನು ಹೊಂದಿದ್ದೇವೆ, ಈ ದೈವತ್ವವನ್ನು ಇಲ್ಲಿ ಮತ್ತು ಈಗ ನಮ್ಮೊಳಗೆ ಬಹಿರಂಗಪಡಿಸಲು – ಬೇರೊಬ್ಬರ ಹಿಂದಿನ ತ್ಯಾಗದ ಅಗತ್ಯವಿಲ್ಲ. ಈ ಸಬಲೀಕರಣ ಕಲ್ಪನೆಯನ್ನು ವಿವರಿಸಲು ನಾವು “ಹಿಂದೂ ಶುಭ ಸಮಾಚಾರ” ಎಂಬ ಪದವನ್ನು ರಚಿಸಿದ್ದೇವೆ.

ಇಂತಹ ಚಿಂತನೆ ಹಿಂದೂ ಶುಭ ಸಮಾಚಾರದತ್ತ  ಬರೀ ಒಂದು ಪಕ್ಷಿ ನೋಟ ಅಷ್ಟೇ. ಈ ಸಮಾಚಾರವೂ ಮನುಷ್ಯನನ್ನು ಸ್ವಸಾಮರ್ಥ್ಯ ಹೆಚ್ಚಿಸುವತ್ತ, ಮತ್ತು ದೇವರು, ಮನುಷ್ಯ ಮತ್ತು ಬ್ರಹ್ಮಾಂಡದ ಐಕ್ಯತೆಯನ್ನು ಒತ್ತಿಹೇಳುತ್ತದೆ. ಏಕರೂಪತೆಗಿಂತ ವೈವಿಧ್ಯತೆಯು ವಾಸ್ತವದ ನಿಜವಾದ ತಿಳುವಳಿಕೆಯಾಗಿದೆ. ಅಂತಹ ವಿಶ್ವ ದೃಷ್ಟಿಕೋನದ ಕೆಲವು ಪ್ರಮುಖ ಭರವಸೆಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ:

ಈ ವೆಬ್‌ಸೈಟ್ https://beingdifferentbook.com ಹಿಂದೂ ಸುವಾರ್ತೆಯ ಅಡಿಯಲ್ಲಿ ಇಂತಹ ವ್ಯಾಪಕವಾದ ಆಲೋಚನೆಗಳು, ಉದಾಹರಣೆಗಳು ಮತ್ತು ಅಭ್ಯಾಸಗಳ ಕುರಿತು ಪ್ರಬಂಧಗಳು ಮತ್ತು ಚರ್ಚೆಗಳನ್ನು ನೀಡುತ್ತದೆ. ಈ ಪ್ರಬಂಧಗಳು ಭಾರತದ ಧರ್ಮ ಸಂಪ್ರದಾಯಗಳಾದ ಹಿಂದೂ ಧರ್ಮ, ಬೌದ್ಧಧರ್ಮ, ಸಿಖ್ ಧರ್ಮ ಮತ್ತು ಜೈನ ಧರ್ಮಗಳ ತಾತ್ವಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಒಳಗೊಂಡಿವೆ. ಮೇಲಿನವುಗಳನ್ನು ನಮ್ಮ ಮಾರ್ಗದರ್ಶಿ ಕೇಂದ್ರಗಳಾಗಿ ಮತ್ತು ನಡೆಯುತ್ತಿರುವ ಚರ್ಚೆಗಳ ಮೂಲಕ, ಅಂತರ್ ಧರ್ಮದ ಸಂಬಂಧಗಳು, ನಂಬಿಕೆ ಮತ್ತು ವಿಜ್ಞಾನದ ನಡುವಿನ ಸಂಬಂಧಗಳು ಮತ್ತು ಮಾನವೀಯತೆ ಮತ್ತು ಪ್ರಕೃತಿಯ ನಡುವಿನ ಸಂಬಂಧಗಳ ಹೊಸ ಯುಗವನ್ನು ತರಲು ನಾವು ಆಶಿಸುತ್ತೇವೆ.  

ಇತ್ತೀಚಿನ ಪುಸ್ತಕ, ಬೀಯಿಂಗ್ ಡಿಫರೆಂಟ್: ಆನ್ ಇಂಡಿಯನ್ ಚಾಲೆಂಜ್ ಟು ವೆಸ್ಟರ್ನ್ ಯೂನಿವರ್ಸಲಿಸಂ (ಹಾರ್ಪರ್‌ಕಾಲಿನ್ಸ್ , 2011) (BEING DIFFERENT: An Indian Challenge to Western Universalism), ಈ ವಿಶ್ವದೃಷ್ಟಿಕೋನವು ಮುಖ್ಯವಾಹಿನಿಯ ಪಾಶ್ಚಿಮಾತ್ಯ ಚಿಂತನೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಪರಿಶೀಲಿಸುತ್ತದೆ, ಇದರಲ್ಲಿ ಜೂಡಿಯೊ-ಕ್ರಿಶ್ಚಿಯನ್ ವೈವಿಧ್ಯತೆ, ಯುರೋಪಿಯನ್ ಜ್ಞಾನೋದಯದ ಆಧಾರಿತ ಜಾತ್ಯತೀತ ವೈವಿಧ್ಯತೆ ಮತ್ತು ಆಧುನಿಕೋತ್ತರ ಚಿಂತನೆಗಳನ್ನೂ ತೀಕ್ಷಣವಾಗಿ ಅಧ್ಯಯನ ಮಾಡುತ್ತದೆ.  

Translation of – https://HinduGoodNews.com

Exit mobile version